ಉಳಿದವರು ಕಂಡಂತೆ

ಉಳಿದವರು ಕಂಡಂತೆ

ಎಲ್ರೂ ಆಡ್ತಾರೆ ಮನ್ಸಿಗ್ ಬಂದಹಂಗೆ

ನನ್ಮಾತ್ ಎಲ್ ಕೇಳ್ತಾರೆ ಈ ಜನ್ತೆ

ನಾನ್ ಬಿಟ್ಬಿಟ್ಟಿದ್ದೀನಪ್ಪ ಬೇರೆಯವರ್ ಚಿಂತೆ

ಇವರಿಗೆಲ್ಲ ಜಗತ್ತೇ ಉಳಿದವರು ಕಂಡಂತೆ

ಹಾಡಂತೆ ಬರೆಯೋದರು ಕೇಳಿದರು ಆ ದೇವ್ರನ್ನು

ಹೇಳಿಕೊಟ್ಟ ನಿನಗನಿಸಿದ ಬಿಟ್ಟು ಎಲ್ಲಾನು ಉಳಿದವರು ಕಂಡಂತೆ

ಈಡ್ಗಾಯಿ ಹೊಡೆದಂತೆ ನಮಾಜಲ್ಲಿ ಕರೆದಂತೆ

ಕೋಲೆರಡು ಕೋಸಾದಂತೆ ಉಳಿದವರು ಕಂಡಂತೆ

ಕಣ್ಣು ನಿನ್ನದಾದರೇನು ನೋಡೋದು ಬೇರೆಯವರಲ್ಲವೇನು

ನೋಡೋರು ಬೇರೆಯವರಾದರೇನು ಅಲ್ಲಿ ಹುಡ್ಕು ನೀನು ನಿನ್ನ ತನವನ್ನು

ಡೀಸಿಲ್ ಗಾಡಿ ಪೆಟ್ರೋಲನಲ್ಲಿ ಓಡೊಲ್ವಂತೆ

ಡ್ರೈವ್ ಮಾಡಿ ನೋಡೊಕ್ ಇವ್ರಿಗೇನು ದಾಡಿಯಂತೆ

ಇಲ್ಲಿ ಎಲ್ಲಾ ಸ್ಟೋರಿಗಳು ಬರೀ ಅಂತೆ ಕಂತೆ

ಕೇಳಿದ್ರೆ ಹೇಳ್ತಾರೆ ಹೇ ನನ್ಗೊತ್ತಿಲ್ಲಪ್ಪ ಎಲ್ಲಾ ಉಳಿದವರು ಕಂಡಂತೆ

ದಾರಿ ಸುಮ್ನೆ ನಿಂತೈತೆ ನಾವೆ ಮುಂದಕ್ ಹೋದಂತೆ

ಹಿಂದೆ ಮುಂದೆ ನಾವು ಹೋದಂತೆ ಹಿಂದಿನ್ ದಾರಿ ಯಾಕೊ ಕಡೆದೈತೆ

ದೇವ್ರ್ ಮುಂದೆ ಭಕ್ತ, ಭಕ್ತನ್ ಮುಂದೆ ದ್ಯಾವ್ರು

ಇಬ್ರು ಸುಮ್ನವ್ರೆ ಕಾರಣ ಸುಮ್ನಿರದೆ ಬೇರೆ

ಪಂಚಭೂತ ಯಾರಂತೆ ಗೊತ್ತಾಗೊದ್ ನಾವ್ ಸತ್ತ್ಮೇಲಂತೆ

ಸಾಯೋದು ನಾವ್ ಹೇಗಂತೆ

ನಮ್ ಬದುಕಿನ ಕೊನೆ ಲೈನೆ ಬರೆದಂತೆ

ಉಳಿದವರು ಕಂಡಂತೆ

ಚಿತ್ರ ನೋಡಿ